ಬಸವಣ್ಣವರ ವಚನಗಳನ್ನು ಕನ್ನಡದಿಂದ ಇಂಗ್ಲಿಷ್ ಗೆ ಅನುವಾದ : ಸಂಸದ ರಮೇಶ ಜಿಗಜಿಣಗಿ ಶ್ಲಾಘನೆ



ವಿಜಯಪುರ : 12ನೇ ಶತಮಾನದಲ್ಲಿ ಬಸವಣ್ಣನವರು ಜನಸಮಾನ್ಯರ ಆಡು ಭಾಷೆಯಲ್ಲಿ ರಚಿಸಿದ ವಚನಗಳನ್ನು ಇದೀಗ ವಿಜಯಪುರದ ಪೊಲೀಸ್ ಅಧಿಕಾರಿ ಡಿವೈಎಸ್ಪಿ ಬಸವರಾಜ ಯಲಿಗಾರ ಅವರು ಇಂಗ್ಲಿಷ್ ಗೆ ಅನುವಾದಿಸಿರುವ ಮೈ ಮಿ ಈಸ್ ದಿ (ನನ್ನೊಳಗಿನ ನಾನು ನೀನು) ಪುಸ್ತಕವನ್ನು ನಗರದಲ್ಲಿ ಇಂದು ಸಂಸದರ ರಮೇಶ ಜಿಗಜಿಣಗಿ ಅವರ ಕಛೇರಿಗೆ ಆಗಮಿಸಿ ಪುಸ್ತಕ ನೀಡಿದರು.

ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆಯಲ್ಲಿದ್ದುಕೊಂಡು ವಚನ ಸಾಹಿತ್ಯವನ್ನು ಕನ್ನಡದಿಂದ ಇಂಗ್ಲಿಷ್ ಗೆ ಅನುವಾದÀ ಮಾಡಿದ ಡಿವೈಎಸ್ಪಿ ಬಸವರಾಜ ಯಲಿಗಾರ ರವರ ಕಾರ್ಯಕ್ಕೆ ಸಂಸದರು ಶ್ಲಾಘನೆ ವ್ಯಕ್ತಪಡಿಸಿದರು. ಬಸವಣ್ಣನವರ ವಿಚಾರಗಳು ಇಡೀ ಜಗತ್ತಿನಾದ್ಯಂತ ವಿಚಾರಧಾರೆಗಳು ಪಸರಿಸಲಿ ಎಂದು ಹಾರೈಸಿ ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಆರ್.ಎಸ್. ಪಾಟೀಲ ಕುಚಬಾಳ, ಪಾಲಿಕೆ ಸದಸ್ಯರಾದ ಮಳುಗೌಡ ಪಾಟೀಲ, ವಿಜಯಜೋಶಿ ಉಪಸ್ಥಿತರಿದ್ದರು.

Post a Comment

ನವೀನ ಹಳೆಯದು